ದಿನಾಂಕ:31-10-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಜಿಲ್ಲಾ ಪರಿಷತ್ ಮಹಾಸಭೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ,145ನೇ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿಯನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿತ್ತು. ಪ್ರಾರ್ಥಾನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಬೋರಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್ ರವರು ವಹಿಸಿದ್ದರು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು, ಶ್ರೀ ಶರಣೇಗೌಡ ಅಧ್ಯಕ್ಷರು ಸ್ಥಳೀಯ ಸಂಸ್ಥೆ ಸಿಂಧನೂರು, ಶ್ರೀ ಎಲ್.ಬಿ.ಹೋರಾಪ್ಯಾಟಿ ಹಾಗೂ ಜಿಲ್ಲಾ ಪರಿಷತ್ ಸಭೆಯ ಸರ್ವಾ ಸದಸ್ಯರು ಮತ್ತು ರೋವರ್ಸ್ ರವರು ಉಪಸ್ಥಿತರಿದ್ದರು. ಸ್ವಾಗತವನ್ನು ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ನಿರೂಪಣೆಯನ್ನು ಕು.ಅಂಬಣ್ಣ ನಾಯಕ ಎಸ್.ಜಿ.ವಿ ಮತ್ತು ವಂದನಾರ್ಪಣೆಯನ್ನು ಶ್ರೀ ನಾಗೇಶ ಗೌಡ ಡಿ.ಟಿ.ಸಿ.ಸ್ಕೌಟ್ ರವರು ನೆರವೇರಿಸಿದರು.
Comments
Post a Comment