Skip to main content

Posts

Showing posts from December, 2020

ದಿನಾಂಕ:31-12-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು. ರಾಜ್ಯ ಸಂಸ್ಥೆ ವತಿಯಿಂದ ನೀಡಿರುವ 2021ನೇ ಸಾಲಿನ ಕ್ಯಾಲೆಂಡರ್ ನ್ನು ಮಾನ್ಯ ಶ್ರೀ ಶೇಖ್ ತನ್ವೀರ್ ಆಸಿಫ್ ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರಾಯಚೂರು ರವರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಅಜೀಜಾ ಸುಲ್ತಾನಾ ಜಿಲ್ಲಾ ಮುಖ್ಯ ಆಯುಕ್ತರು ರಾಯಚೂರು, ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್,ಡಿ.ಓ.ಟಿ ಗೈಡ್,ಎಸ್.ಜಿ.ವಿ ರವರು ಉಪಸ್ಥಿತರಿದ್ದರು.

 

ದಿನಾಂಕ:29-12-2020 ರಂದು ಸಮೂಹ ಸಂಪನ್ಮೂಲ ಕೇಂದ್ರ ಮಸ್ಕಿ ವತಿಯಿಂದ ಮುಖ್ಯ ಗುರುಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್ ರವರು ಸಭೆಯಲ್ಲಿ ಉಪಸ್ಥಿತರಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಆನ್ ಲೈನ್ ವರ್ಚುವಲ್ ಮೂಲಕ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿ ಮತ್ತು ನೋಂದಣಿ ಮಾಡಿಸುವ ವಿಧಾನವನ್ನು ತಿಳಿಸಲಾಯಿತು.ಮತ್ತು *ರಾಜ್ಯ ಪುರಸ್ಕಾರ ಅರ್ಜಿಗಳನ್ನು ಆನ್ಲೈನ್ ಮೂಲಕ ಭರ್ತಿ ಮಾಡುವ ವಿಧಾನವನ್ನು ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿ ನೀಡಲಾಯಿತು . ಇದೇ ಸಂದರ್ಭದಲ್ಲಿ ಶ್ರೀ ಶಿವಪ್ಪ ಹಸಮಕಲ್ ಕಾರ್ಯದರ್ಶಿಗಳು ಮಸ್ಕಿ, ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಮತ್ತು ಕು.ಅಂಬಣ್ಣ ನಾಯಕ ಎಸ್.ಜಿ.ವಿ ಮತ್ತು ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ರವರು ಉಪಸ್ಥಿತರಿದ್ದರು

 

ದಿನಾಂಕ:09-12-2020 ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ದೇವದುರ್ಗ ವತಿಯಿಂದ ವರ್ಚುವಲ್ ಮೂಲಕ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಹಾಗೂ ನೋಂದಣಿ ಮಾಡಿಸುವ ಬಗ್ಗೆ ತರಬೇತಿಯನ್ನು ಆಯೋಜಿಸಲಾಗಿತ್ತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಶಿವರಾಜ ಬಿರಾದಾರ್ ಬಿ.ಆರ್.ಸಿ.ಕೋಡಿನೇಟರ್ ದೇವದುರ್ಗ ವಹಿಸಿದ್ದರು.ಮುಖ್ಯಅತಿಥಿಗಳಾಗಿ ಶ್ರೀಮತಿ ಸುಜಾತ ಹೊನ್ನಾರ್ ಡಿ.ವೈ.ಸಿ.ಪಿ.ರಾಯಚೂರು, ಅತಿಥಿಗಳಾಗಿ ಶ್ರೀ ತಿರುಪತಿ ಸೂಗುರ್ ಅಧ್ಯಕ್ಷರು, ಶ್ರೀ ನಿಂಗಪ್ಪ ಆಲ್ಯಾಳಾ ಟಿ.ಪಿ.ಓ.ದೇವದುರ್ಗ, ಶ್ರೀ ಹುಸೇನ್ ಪೀರ್ ಮುಖ್ಯಗುರುಗಳು ಸ.ಪ್ರೌ.ಶಾಲೆ.ಹರಿಕೇರಾ, ಶ್ರೀಮತಿ ಸುಮಂಗಲ ಉಪಾಧ್ಯಕ್ಷರು ಹಾಗೂ ರೇಂಜರ್ ಲೀಡರ್, ಶ್ರೀ ರಂಗನಾಥ ಚಲುವಾದಿ ಕಾರ್ಯದರ್ಶಿಗಳು,ಕು.ಅಂಬಣ್ಣ ನಾಯಕ ಎಸ್.ಜಿ.ವಿ., ಶ್ರೀ ಲಿಂಗಣ್ಣ ಖಜಾಂಚಿ, ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಮತ್ತು ಕಬ್ ಮಾಸ್ಟರ್, ಫ್ಲಾಕ್ ಲೀಡರ್ ಮತ್ತು ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ ರೇಂಜರ್ ಲೀಡರ್ ರವರು ಉಪಸ್ಥಿತರಿದ್ದರು.