Skip to main content

Posts

ದಿನಾಂಕ:31-12-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು. ರಾಜ್ಯ ಸಂಸ್ಥೆ ವತಿಯಿಂದ ನೀಡಿರುವ 2021ನೇ ಸಾಲಿನ ಕ್ಯಾಲೆಂಡರ್ ನ್ನು ಮಾನ್ಯ ಶ್ರೀ ಶೇಖ್ ತನ್ವೀರ್ ಆಸಿಫ್ ಭಾ.ಆ.ಸೇ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರಾಯಚೂರು ರವರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ಅಜೀಜಾ ಸುಲ್ತಾನಾ ಜಿಲ್ಲಾ ಮುಖ್ಯ ಆಯುಕ್ತರು ರಾಯಚೂರು, ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್,ಡಿ.ಓ.ಟಿ ಗೈಡ್,ಎಸ್.ಜಿ.ವಿ ರವರು ಉಪಸ್ಥಿತರಿದ್ದರು.

 
Recent posts

ದಿನಾಂಕ:29-12-2020 ರಂದು ಸಮೂಹ ಸಂಪನ್ಮೂಲ ಕೇಂದ್ರ ಮಸ್ಕಿ ವತಿಯಿಂದ ಮುಖ್ಯ ಗುರುಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್ ರವರು ಸಭೆಯಲ್ಲಿ ಉಪಸ್ಥಿತರಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ಆನ್ ಲೈನ್ ವರ್ಚುವಲ್ ಮೂಲಕ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿ ಮತ್ತು ನೋಂದಣಿ ಮಾಡಿಸುವ ವಿಧಾನವನ್ನು ತಿಳಿಸಲಾಯಿತು.ಮತ್ತು *ರಾಜ್ಯ ಪುರಸ್ಕಾರ ಅರ್ಜಿಗಳನ್ನು ಆನ್ಲೈನ್ ಮೂಲಕ ಭರ್ತಿ ಮಾಡುವ ವಿಧಾನವನ್ನು ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಮಾಹಿತಿ ನೀಡಲಾಯಿತು . ಇದೇ ಸಂದರ್ಭದಲ್ಲಿ ಶ್ರೀ ಶಿವಪ್ಪ ಹಸಮಕಲ್ ಕಾರ್ಯದರ್ಶಿಗಳು ಮಸ್ಕಿ, ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಮತ್ತು ಕು.ಅಂಬಣ್ಣ ನಾಯಕ ಎಸ್.ಜಿ.ವಿ ಮತ್ತು ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್ ರವರು ಉಪಸ್ಥಿತರಿದ್ದರು

 

ದಿನಾಂಕ:09-12-2020 ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ದೇವದುರ್ಗ ವತಿಯಿಂದ ವರ್ಚುವಲ್ ಮೂಲಕ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆ ಹಾಗೂ ನೋಂದಣಿ ಮಾಡಿಸುವ ಬಗ್ಗೆ ತರಬೇತಿಯನ್ನು ಆಯೋಜಿಸಲಾಗಿತ್ತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಶಿವರಾಜ ಬಿರಾದಾರ್ ಬಿ.ಆರ್.ಸಿ.ಕೋಡಿನೇಟರ್ ದೇವದುರ್ಗ ವಹಿಸಿದ್ದರು.ಮುಖ್ಯಅತಿಥಿಗಳಾಗಿ ಶ್ರೀಮತಿ ಸುಜಾತ ಹೊನ್ನಾರ್ ಡಿ.ವೈ.ಸಿ.ಪಿ.ರಾಯಚೂರು, ಅತಿಥಿಗಳಾಗಿ ಶ್ರೀ ತಿರುಪತಿ ಸೂಗುರ್ ಅಧ್ಯಕ್ಷರು, ಶ್ರೀ ನಿಂಗಪ್ಪ ಆಲ್ಯಾಳಾ ಟಿ.ಪಿ.ಓ.ದೇವದುರ್ಗ, ಶ್ರೀ ಹುಸೇನ್ ಪೀರ್ ಮುಖ್ಯಗುರುಗಳು ಸ.ಪ್ರೌ.ಶಾಲೆ.ಹರಿಕೇರಾ, ಶ್ರೀಮತಿ ಸುಮಂಗಲ ಉಪಾಧ್ಯಕ್ಷರು ಹಾಗೂ ರೇಂಜರ್ ಲೀಡರ್, ಶ್ರೀ ರಂಗನಾಥ ಚಲುವಾದಿ ಕಾರ್ಯದರ್ಶಿಗಳು,ಕು.ಅಂಬಣ್ಣ ನಾಯಕ ಎಸ್.ಜಿ.ವಿ., ಶ್ರೀ ಲಿಂಗಣ್ಣ ಖಜಾಂಚಿ, ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಮತ್ತು ಕಬ್ ಮಾಸ್ಟರ್, ಫ್ಲಾಕ್ ಲೀಡರ್ ಮತ್ತು ಸ್ಕೌಟ್ ಮಾಸ್ಟರ್ ಗೈಡ್ ಕ್ಯಾಪ್ಟನ್ ರೇಂಜರ್ ಲೀಡರ್ ರವರು ಉಪಸ್ಥಿತರಿದ್ದರು.

 

ದಿನಾಂಕ:02-11-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ EFA Foundation ಸಂಸ್ಥೆಯಲ್ಲಿರುವ ಮೆಹಬೂಬ್ ನಗರದ ಸ್ಲಂಮ್ ಮಕ್ಕಳಿಗೆ ಉಚಿತವಾಗಿ ಬಿಸ್ಕೇಟ್ ಗಳನ್ನು ನೀಡಲಾಯಿತು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಸಹ ಮಾಹಿತಿಯನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಅಮರೇಗೌಡ ಪಾಟೀಲ್ ಸಹ ಕಾರ್ಯದರ್ಶಿಗಳು, ಶ್ರೀಮತಿ ಜಬೀನಾ, ಶ್ರೀ ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು,ಕು.ಅಂಬಣ್ಣ ನಾಯಕ ಎಸ್.ಜಿ.ವಿ, ರೋವರ್ಸ್ ಜಯಸಿಂಹ, ಶಿವಪ್ರಕಾಶ್ ಕೋರಿ ಉಪಸ್ಥಿತರಿದ್ದರು.*

 

ದಿನಾಂಕ:02-11-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಭಾರತೀಯ ಕುಟುಂಬ ಕಲ್ಯಾಣ ಸಂಘದಲ್ಲಿ ಕುಟುಂಬ ಕಲ್ಯಾಣ ಸೌಲಭ್ಯವನ್ನು ಪಡೆಯಲು ಬಂದಿರುವ ಮಹಿಳೆಯರಿಗೆ ಉಚಿತವಾಗಿ ಮಾಸ್ಕ್ ಮತ್ತು ಬಿಸ್ಕೇಟ್ ನೀಡಲಾಯಿತು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಸಹ ಮಾಹಿತಿಯನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಅಮರೇಗೌಡ ಪಾಟೀಲ್ ಸಹ ಕಾರ್ಯದರ್ಶಿಗಳು, ಶ್ರೀ ಕೆ.ಹನುಮಂತಪ್ಪ, ಶ್ರೀ ವಾಗೇಶ್ ಮ್ಯಾನೇಜರ್,ಡಾ: ಪ್ರೀತಿ, ಶ್ರೀ ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು,ಕು.ಅಂಬಣ್ಣ ನಾಯಕ ಎಸ್.ಜಿ.ವಿ, ರೋವರ್ಸ್ ಜಯಸಿಂಹ, ಶಿವಪ್ರಕಾಶ್ ಕೋರಿ ಉಪಸ್ಥಿತರಿದ್ದರು.

 

ದಿನಾಂಕ:31-10-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಜಿಲ್ಲಾ ಪರಿಷತ್ ಮಹಾಸಭೆ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ,145ನೇ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿಯನ್ನು ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿತ್ತು. ಪ್ರಾರ್ಥಾನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಬೋರಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್ ರವರು ವಹಿಸಿದ್ದರು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು, ಶ್ರೀ ಶರಣೇಗೌಡ ಅಧ್ಯಕ್ಷರು ಸ್ಥಳೀಯ ಸಂಸ್ಥೆ ಸಿಂಧನೂರು, ಶ್ರೀ ಎಲ್.ಬಿ.ಹೋರಾಪ್ಯಾಟಿ ಹಾಗೂ ಜಿಲ್ಲಾ ಪರಿಷತ್ ಸಭೆಯ ಸರ್ವಾ ಸದಸ್ಯರು ಮತ್ತು ರೋವರ್ಸ್ ರವರು ಉಪಸ್ಥಿತರಿದ್ದರು. ಸ್ವಾಗತವನ್ನು ಶ್ರೀ ಬಸವರಾಜ ಗದಗಿನ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ನಿರೂಪಣೆಯನ್ನು ಕು.ಅಂಬಣ್ಣ ನಾಯಕ ಎಸ್.ಜಿ.ವಿ ಮತ್ತು ವಂದನಾರ್ಪಣೆಯನ್ನು ಶ್ರೀ ನಾಗೇಶ ಗೌಡ ಡಿ.ಟಿ.ಸಿ.ಸ್ಕೌಟ್ ರವರು ನೆರವೇರಿಸಿದರು.